ದೊಡ್ಡಬಳ್ಳಾಪುರಕ್ಕೆ ಹೆಚ್ಚುವರಿ ಜಿಬಿಎ ಕಸ,
ದೊಡ್ಡಬಳ್ಳಾಪುರ : ತಾಲ್ಲೂಕಿನ ಎಂಎಸ್ ಜಿ ಪಿ ಕಸ ವಿಲೇವಾರಿಯ ಘಟಕಕ್ಕೆ ಹೆಚ್ಚುವರಿ ಕಸ ಸುರಿಯಾಗುತ್ತಿದೆ, ಮಾಹಿತಿ ಹಿನ್ನಲೆ ದಾರಿ ಮಧ್ಯದಲ್ಲೇ ಕಸದ ಲಾರಿಗಳನ್ನ ತಡೆದ ಶಾಸಕ ಧೀರಜ್ ಮುನಿರಾಜು ಲಾರಿಗಳನ್ನು ವಾಪಸ್ ಕಳಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ MSGP ಕಸ ವಿಲೇವಾರಿ ಘಟಕಕ್ಕೆ ಕಳೆದ 13 ವರ್ಷಗಳಿಂದ ಬಿಬಿಎಂಪಿ ಕಸ ಸುರಿಯಲಾಗುತ್ತಿದೆ, ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದ್ದಾಗಿ ಹೇಳಿ ಪ್ರಾರಂಭವಾದ ಘಟಕ, ನಂತರ ಕೇವಲ ಕಸ ಸುರಿಯುವುದಕ್ಕೆ ಮಾತ್ರ ಸೀಮಿತವಾಗಿದೆ, ಇದರಿಂದ ಘಟಕದಲ್ಲಿ ಬೆಟ್ಟದಂತೆ ಕಸ ಸಂಗ್ರಹವಾಗಿದೆ, ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಗಾಳಿ,ನೀರು,ಮಣ್ಣು ವಿಷವಾಗಿದೆ, ಘಟಕ ಮುಚ್ಚುವಂತೆ ಗ್ರಾಮಸ್ಥರು ಹೋರಾಟ ಮಾಡುತ್ತಿದ್ದಾರೆ.
ಪ್ರತಿದಿನ 75 ಲಾರಿಗಳ ಕಸ ಸುರಿಯುವುದಕ್ಕೆ ಮಾತ್ರ ಅವಕಾಶ ಇದೆ, ಆದರೆ ಹೆಚ್ಚುವರಿ ಕಸ ಸುರಿಯಲಾಗುತ್ತಿದೆ ಎಂಬ ಮಾಹಿತಿ ಹಿನ್ನಲೆ ಶಾಸಕ ಧೀರಜ್ ಮುನಿರಾಜು ಕಸದ ಲಾರಿಗಳನ್ನ ದಾರಿ ಮಧ್ಯದ ದೊಡ್ಡಮಂಕನಾಳ ಗ್ರಾಮದ ಬಳಿ ತಡೆದು ವಾಪಸ್ ಕಳಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಎಂ ಎಸ್ ಜಿ ಪಿ ಘಟಕದ ವಿರುದ್ಧ ನಮ್ಮ ಹೋರಾಟ ಸತತವಾಗಿ 3 ವರ್ಷಗಳಿಂದ ನಡೆಯುತ್ತಿದ್ದು, ಸ್ಥಳೀಯ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸದನದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಬಳಿ ಹಲವು ಬಾರಿ ಮನವಿ ಮಾಡಿದ್ದೇನೆ. ಎಂ ಎಸ್ ಜಿ ಪಿ ಕಸವಿಲೇವಾರಿ ಘಟಕ ನಿಲ್ಲುವವರೆಗೂ ನಮ್ಮ ಹೋರಾಟ ನಿರಂತರ ನಡೆಯಲಿದೆ ಎಂದರು.
ಇಲ್ಲಿ ನಾವು ತಡೆದಿರುವ ಸಾಕಷ್ಟು ವಾಹನಗಳಿಗೆ ಸೂಕ್ತ ದಾಖಲಾತಿಗಳಿಲ್ಲ ಅಲ್ಲದೆ ಈ ವಾಹನಗಳು ಪ್ರತಿನಿತ್ಯ ಸಂಚಾರಿಸುವ ವಾಹನಗಳಲ್ಲ , ವಾಹನಗಳಿಗೆ ತೆರಿಗೆ ಪಾವತಿಯಾಗಿಲ್ಲ ಈ ಕುರಿತು ಸಾರಿಗೆ ಇಲಾಖೆಯ ಗಮನಕ್ಕೆ ತಂದಿದ್ದು ಅಧಿಕಾರಿಗಳು ಅಂತಹ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ ಎಂದರು.