ಜಿಲ್ಲಾಧಿಕಾರಿ ಬಸವರಾಜ್ ದಿಟ್ಟ ಹಜ್ಜೆ: ಮತ್ತೊಮ್ಮೆ ರಾಜ್ಯಕ್ಕೆ ಮಾದರಿ
ಬೆಂಗಳೂರು ಗ್ರಾಮಾಂತರ: ಭೂಮಿಗೆ ಚಿನ್ನದ ಬೆಲೆ ಬಂದದ್ದೆ ಬಂದದ್ದು ಎಲ್ಲೆಲೆಲ್ಲೂ ಜಂಇನಿ ವ್ಯಾಜ್ಯಗಳೆ ಹೆಚ್ಚಾಗಿ ಕಾಣ ಸಿಗ್ತಿವೆ. ನ್ಯಾಯಾಲಯದ ಮೊರೆ ಹೋದವರು ಒಂದಿಷ್ಠಾದರೆ ಮತ್ತೊಂದಿಷ್ಟು ಹಾದಿ ಬೀದಿ ರಂಪಗಳಾಗಿ ಸಂಬAಧಗಳಿಗೆ ಬೆಲೆ ಇಲ್ಲದಂತಾಗಿದೆ.
ಆಸ್ತಿಗಳಿಂದಾಗಿ ತಾಯಿ, ತಂದೆ, ಮಗ, ಮಗಳು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರೆ ಬೀದಿಗಿಳಿದು ಹೊಡೆದಾಡುತ್ತಿರುವ ಸನ್ನಿವೇಷಗಳು ಎತ್ತೇಚ್ಚವಾಗಿ ಕಾಣ ಸಿಗ್ತಿವೆ. ಅದಕ್ಕಾಗೆ ಹೆಚ್ಚುವರಿಯಾದ ಪ್ರಕರಣಗಳ ಇತ್ಯರ್ಥ, ಸೇರಿದಂಥೆ ಸಂಬAದಗಳನ್ನು ಬೆಸೆಯುವ ಪ್ರಯತ್ನಕ್ಕಾಗಿ ಸಿವಿಲ್ ನಾಯಾಲಯಗಳಲ್ಲಿ ಲೋಕಧಾಲತ್ gಎಂಬ ಕಖಾರ್ಯಕ್ರಮ ಜಾರಿಗೆ ಬಂದಿದ್ದರೂ ಯಾರು ಸದುಪಯೋಗ ಪಡಿಸಿಕೊಂಡು ವ್ಯಾಜ್ಯಗಳನ್ನ ಮುಖಾ-ಮುಖಿ ಇತ್ಯರ್ಥ ಮಾಡಿಕೊಳ್ಳಲು ಒಂದು ಅವಕಾಶ ಮತ್ತು ವೇದಿಕೆ ಕಲ್ಪಿಸಿಕೊಡುತ್ತಿದೆ.
ಇದೇ ರೀತಿ ಸ್ಥಳಿಯ ತಹಶಿಲ್ದಾರ್, ಎ.ಸಿ, ಡಿ.ಸಿ ಸೇರಿದಂತೆ ಚಾಲ್ತಿಯಲ್ಲಿ ಇರುವ ಬಹುತೇಕ ಪ್ರಕರಣಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲ್ಲ ಆದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದಿಷ್ಟು ಪ್ರಕರಣಗಳಿಗೆ ರಾಜ್ಯದಲ್ಲೆ ಮೊದಲ ಬಾರಿಗೆ ಲೋಕ ಅದಾಲತ್ ವ್ಯವಸ್ತೆ ಕಲ್ಪಿಸಿದ್ದು, ಜಿಲ್ಲಾಧಿಕಾರಿ ಬಸವರಾಜು ನೇತೃತ್ವದ ತಂಡದಿAದ ಇಬ್ಬರು ವಕೀಲರ ಸಮ್ಮುಖದಲ್ಲಿ ವಾದಿ-ಪ್ರತಿವಾದಿಗಳಿಗೆ ರಾಜಿ ಸಂದಾನ ಮಾಡಿಕೊಳ್ಳುವ ವ್ಯವಸ್ತೆಗೆ ಬುನಾದಿ ಹಾಕಲಾಯಿತು.
ಮೊದಲಬಾರಿಗೆ ಒಂದಿಷ್ಟು ಪ್ರಕರಣಗಳನ್ನ ಲೋಕ ಅದಾಲತ್ ಮೂಲಕ ಇತ್ಯರ್ಥ ಪಡಿಕೊಳ್ಳಲು ಇಬ್ಬರಿಗೂ ಅವಕಾಶ ಕಲ್ಪಿಸಿದ್ದು ಸಾಕಷ್ಟು ಪ್ರಕರಣಗಳಲ್ಲಿ ವಯಕ್ತಿಕ ಬಿನ್ನಾಭಿಪ್ರಾಯ, ಕುಟುಂಬದಲ್ಲಿ ಒಂದಾಣಿಕೆ ಕಡಿಮೆ ಆಗಿರುವುದು ಸ್ಪಷ್ಟವಾಗಿ ಕಾಣ ಸಿಗುತ್ತಿತ್ತಾದರೂ, ವಾದಿ ಪ್ರತಿವಾದಿಗಳಿಗೆ ವಕೀಲರ ಮೂಲಕ ಮನವರಿಕೆ ಮಾಡಿ ಪ್ರಕರಣ ಇತ್ಯರ್ಥ ಪಡಿಸಿಕೊಂಡು ಒಂದಾಣಿಕೆಯಿAದ ಸಹ ಬಾಳ್ವೆ ಮಾಡುವಂತೆ ಮನವರಿಕೆ ಮಾಡಿಕೊಡಲಾಯಿತು.