ಮೈಸೂರಿನ ಅರಮನೆ ದ್ವಾರ ಮುಂಭಾಗ ಸ್ಪೋಟದ ವರದಿ ನೀಡುವಂತೆ ಗೃಹಸಚಿವರ ಸೂಚನೆ..!

ಬೆಂಗಳೂರು: ಗುರುವಾರ ರಾತ್ರಿ ಮೈಸೂರಿನ ಅರಮನೆ ದ್ವಾರದ ಮುಂಭಾಗದಲ್ಲಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.