ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಪಿ.ಎಚ್.ಡಿ.

ಕೃಷಿ ವಿಶ್ವವಿದ್ಯಾನಿಲಯ: ಬೆಂಗಳೂರಿನ ಜಿ.ಕೆ.ವಿ.ಕೆ. ಯ ಜೈವಿಕ ತಂತ್ರಜ್ಞಾನ ವಿಭಾಗದ ಜೀವರಸಾಯನಶಾಸ್ತç ವಿಭಾಗದ ಪಿ.ಎಚ್.ಡಿ. ವಿದ್ಯಾರ್ಥಿ ಶ್ರೀ ಪ್ರವೀಣ್. ಎಸ್.ವಿ. (Pಂಒಃ4219), ರವರಿಗೆ ಅನುಸಂಧಾನ ರಾಷ್ಟಿçÃಯ ಸಂಶೋಧನಾ ಪ್ರತಿಷ್ಠಾನ ಮತ್ತು ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ತಿçÃಸ್ ರವರು ನೀಡುವ “ಪ್ರಧಾನಮಂತ್ರಿ ಡಾಕ್ಟೋರಲ್ ಸಂಶೋಧನಾ ಫೆಲೋಶಿಪ್” (ಪಿ.ಎಂ.ಎಫ್. ಡಿ.ಆರ್)ರವರ ಡಾಕ್ಟೋರಲ್ ಸಂಶೋಧನೆಗೆ ಲಭಿಸಿದೆ. ಅವರು “ಮೆಟಾಬೊಲೈಟ್ ಫಿಂಗರ್ ಪ್ರಿಂಟಿAಗ್ ಮತ್ತು ಜೇನಿನ ಕೊಯ್ಲು ಹಾಗೂ ಗುಣಮಟ್ಟದ ಲಕ್ಷಣಗಳನ್ನು ಹೊರತೆಗೆಯಲು ಎನ್.ಎಂ.ಆರ್ ಸ್ಪೆಕ್ಟ್ರೋಸ್ಕೋಪಿಕ್ ಡೇಟಾವನ್ನು ಮೇಲ್ವಿಚಾರಿತ ಯಂತ್ರದ ಕಲಿಕೆಯ ಮೂಲಕ ವಿಶ್ಲೇಷಣೆ” ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಪಿಎಚ್.ಡಿ ಸಂಶೋಧನೆಯನ್ನು ಪ್ರೊ. ಪಿ.ಎಸ್. ಬೆನ್‌ಹರ್‌ಲಾಲ್, ಜೀವÀರಸಾಯನಶಾಸ್ತ್ರ ವಿಭಾಗ ರವರ ಮಾರ್ಗದರ್ಶನದಲ್ಲಿ ನಡೆಸುತ್ತಿದ್ದಾರೆ. ಈ ಸಂಶೋಧನೆ, ಜೇನಿನ ಗುಣಮಟ್ಟ ಮತ್ತು ಭೌಗೋಳಿಕ ಪ್ರಾಮಾಣಿಕತೆಯನ್ನು ನಿರ್ಧರಿಸಲು ಅಣು ಪ್ರತಿಧ್ವನಿ ಸ್ಪೆಕ್ಟ್ರಲ್ ಡೇಟಾದ ಸ್ಥಳಕಾಲಿಕ ಬದಲಾವಣೆಗಳನ್ನು ಬಹು-ಆಯಾಮದ ಕೀಮೋಮೆಟ್ರಿಕ್ ಗಣನೆಗಳ ಮೂಲಕ ವಿಶ್ಲೇಷಿಸುತ್ತದೆ. ಈ ಅಧ್ಯಯನವು ಎನ್.ಎಂ.ಆರ್ ಸ್ಪೆಕ್ಟ್ರೋಮೆಟ್ರಿ ಬಳಸಿ ಜೇನಿನ ಗುಣಮಟ್ಟವನ್ನು ವೇಗವಾಗಿ ಮೌಲ್ಯಮಾಪನ ಮಾಡಲು ಸಹಾಯಕವಾಗುವ ಮಾದರಿ ಕಲಿಕೆ ಯಂತ್ರವನ್ನು ಅಭಿವೃದ್ಧಿಪಡಿಸುವುದರ ಬಗ್ಗೆ ಪ್ರಸ್ತಾಪಿಸುತ್ತದೆ. 
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್. ವಿ. ಸುರೇಶರವರು ಶ್ರೀ ಪ್ರವೀಣ್‌ರವರ ಸಾಧೆನೆಗೆ ಅಭಿನಂದನೆ ಸಲ್ಲಿಸಿದರು. ಅವರ ಉನ್ನತ ಮಟ್ಟದ ಸಂಶೋಧನಾ ಕಾರ್ಯವನ್ನು ಶ್ಲಾಘಿಸಿ, ಮುಂದಿನ ಶೈಕ್ಷಣಿಕ ಸಾಧನೆಗಳಿಗೆ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.