ಬೇಸಾಯ ಶಾಸ್ತç ಸಂಘದ ವಿಜ್ಞಾನಿಗಳ ಸಮಾವೇಶ
ಬೆಂಗಳೂರು (11.02.26): ಕೃಷಿ ವಿಶ್ವವಿದ್ಯಾನಿಲಯ ಮತ್ತು ಭಾರತೀಯ ಸಂಘದವತಿಯಿAದ ಕರ್ನಾಟಕ ಬೇಸಾಯ ಶಾಸ್ತç ವಿಜ್ಞಾನಿಗಳ ಸಮಾವೇಶವನ್ನು ಹಾಗೂ “ಬೇಸಾಯ ಶಾಸ್ತçದಿಂದ ಹೆಚ್ಚಿನ ಉತ್ಪಾದಕತೆ, ಲಾಭದಾಯಕತೆ, ಮತ್ತು ಸಸ್ಯ ಆರೋಗ್ಯ”ಗಳ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ರಾಷ್ಟçದ ವಿವಿಧೆೆಡೆಯಲ್ಲಿರುವ ಬೇಸಾಯ ಶಾಸ್ತçದ ವಿಜ್ಞಾನಿಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಾಗಾರದ ಉದ್ಘಾಟನೆಯನ್ನು ಡಾ: ಎಂ.ಎನ್. ಶೀಲವಂತರ್, ವಿಶಾಂತ ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ನೆರವೇರಿಸಿ ಸಮಾಜದಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿಸುವಲ್ಲಿ ತಂತ್ರಜ್ಞಾನಗಳು, ಲಾಭದಾಯಕ ಕೃಷಿ ಪದ್ಧತಿಗಳು ಹಾಗೂ ಪರಿಸರ ಸ್ನೇಹಿ ಮತ್ತು ದೀರ್ಘಕಾಲಿಕ ಕೃಷಿ ವ್ಯವಸ್ಥೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿದರು. ಹವಾಮಾನ ಬದಲಾವಣೆ, ಮಣ್ಣಿನ ಆರೋಗ್ಯ, ನೀರಿನ ನಿರ್ವಹಣೆ, ಬೆಳೆ ವೆÀ್ಯವಿದ್ದೀಕರಣ ಮತ್ತು ನವೀನ ಕೃಷಿ ತಂತ್ರಜ್ಞಾನಗಳ ವಿಷಯದ ಮೇಲೆ ತಮ್ಮ ಅಭಿಪ್ರಾಯವನ್ನು ಹಂಚಿಕೊAಡರು. ಬೇಸಾಯ ಶಾಸ್ತçದ ವಿಭಾಗದ ದಿಗ್ಗಜರು ಹಾಗೂ ಅಂತರಾಷ್ಟಿçÃಯ ವಿಜ್ಞಾನಿಗಳಾದ ಡಾ: ಅರಕೇರಿ, ಡಾ: ಎಸ್.ವಿ.ಪಾಟೀಲ್ ಹಾಗೂ ಡಾ: ಕೆ. ಕೃಷ್ಣಮೂರ್ತಿ ರವರ ಕೊಡುಗೆಗಳನ್ನು ಸ್ಮರಿಸಿದರು
ಬೆಂಗಳೂರು ಕೃಷಿವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್.ವಿ. ಸುರೇಶ ರವರು ಕಾರ್ಯಾಗಾರದ ಕುರಿತು ಮಾತನಾಡಿ ಇಂದಿನ ಜಾಗತಿಕ ಕೃಷಿ ಪರಿಸ್ಥಿತಿಯಲ್ಲಿ ಬೇಸಾಯ ಶಾಸ್ತçದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ, ಹವಾಮಾನ ಬದಲಾವಣೆ ಮತ್ತು ಮಣ್ಣಿನ ಆರೋಗ್ಯ ಕುಸಿತದ ಬಗ್ಗೆ ಸಂಶೋಧನೆಗಳು ಕೃಷಿಯ ಭವಿಷ್ಯವನ್ನು ರೂಪಿಸುತ್ತಿವೆ. ರೈತರಿಗೆ ಆರ್ಥಿಕ ಭದ್ರತೆ ನೀಡುವುದ ಜೊತೆಗೆ ಪ್ರಕೃತಿಯೊಂದಿಗೆ ಸಮನ್ವಯ ಸಾಧಿಸಲು ದೀರ್ಘಕಾಲಿಕ ಕೃಷಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ. ಈ ಸಮಾವೇಶ ಮತ್ತು ಕಾರ್ಯಗಾರವು ಬೇಸಾಯ ಶಾಸ್ತçದ ವಿಜ್ಞಾನಿಗಳು ಮತ್ತು ತಜ್ಞರಿಗೆ ಪರಸ್ಪರ ಜ್ಞಾನ ವಿನಿಮಯ, ಸಂಶೋಧನಾ ಸಹಕಾರ ಮತ್ತು ಭವಿಷ್ಯದ ಕೃಷಿ ತಂತ್ರಜ್ಞಾನಗಳಿಗೆ ದಿಕ್ಕುನೀಡುವ ಅತ್ಯುತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಾ:ಡಿ.ಪಿ. ಬಿರಾದರ್, ವಿಶಾಂತ ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ, ಡಾ: ವಿ.ಎಂ.ಭಾಲೆ, ವಿಶಾಂತ ಕುಲಪತಿಗಳು, ಪಿ.ಡಿ.ಕೆ.ವಿ, ಅಕೋಲ, ಡಾ: ಟಿ.ಕೆ ಪ್ರಭಾಕರ ಶೆಟ್ಟಿ, ವ್ಯವಸ್ಥಾಪನಾ ಮಂಡಳಿ ಸದಸ್ಯರು, ಬೆಂಗಳೂರು ಕೃಷಿವಿಶ್ವವಿದ್ಯಾನಿಲಯರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ: ಎಂ. ಹನುಮಂತಪ್ಪ, ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ರಾಯಚೂರು ರವರು ವಹಿಸಿದ್ದರು.