ರೈತರಿಗೆ ಶೈಕ್ಷಣಿಕ ಪ್ರವಾಸ : ರೈತ ಸೇವಾ ಸಹಕಾರ ಸಂಘದ ಸದಸ್ಯರಿಗೆ ಟ್ರಿಪ್
ರೈತರಿಗೆ ಶೈಕ್ಷಣಿಕ ಪ್ರವಾಸ : ರೈತ ಸೇವಾ ಸಹಕಾರ ಸಂಘದ ಸದಸ್ಯರಿಗೆ ಟ್ರಿಪ್
ಬೆಂಗಳೂರು: ಕೃಷಿ ವಿವಿ ಯ ( GKVK ) ರಾಷ್ಟ್ರೀಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೆಲಗಾಣದ ಕರೀಂನಗರ ಜಿಲ್ಲೆಯ ಮುಲಕನೂರು ರೈತ ಉತ್ಪಾದನಾ ಸಂಘ ಮತ್ತು ಹೈದರಾಬಾದ್ ನಗರದ ಎ.ಪಿ ಮಾಸ್ ( ಆಂದ್ರಪ್ರದೇಶ ಮಹಿಳಾ ಅಭಿವೃದ್ದಿ ಸೊಸೈಟಿ ) ಸಂಸ್ಥೆಗೆ 3 ದಿನಗಳ ಶಯಕ್ಷಣಿಕ ಪ್ರವಾಸ ಕೈಗೊಳ್ಳಲಾಯಿತು.
ಪ್ರವಾಸದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಭೋಗನಂಧಿಶ್ವರ ರೈತ ಉತ್ಪಾದಕರ ಸಂಸ್ಥೆ ಮತ್ತು ಶ್ರೀ ಅಮರ ನಾರಾಯಣ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆ ಹಾಗೂ ಕೋಲಾರ ಜಿಲ್ಲೆಯ ಲಕ್ಷ್ಮಿ ಸಾಗರ ರೈತ ಉತ್ಪಾದಕರ ಸಂಸ್ಥೆ ಮತ್ತು ಶ್ರನಿವಾಸಪುರದ ಸಂಜೀವಿನ ಮಹಿಳಾ ಕಿಸಾನ್ ರೈತ ಉತ್ಪಾದಕರ ಸಂಸ್ಥೆಯ 50 ಜನ ರೈತರಿಗೆ ಕೃ.ವಿ.ವಿ ವತಿಯಿಂದ ಶೈಕ್ಷಣಿಕ ಪ್ರವಾಸ ಆಯೋಜನೆ ಮಾಡಲಾಗಿತ್ತು.
ರೈತರಿಗೆ ಮಾರುಕಟ್ಟೆ ವ್ಯವಸ್ಥೆ, ಕೃಷಿ ಉತ್ಪನ್ನಗಳ ಬ್ರಾಂಡಿಂಗ್, ಲೇಬಲಿಂಗ್, ರಫ್ತು ಸೇರಿದಂತರೆ ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಲಾಯಿತು. ಪ್ರವಾದ ಮಾರ್ಶಕರಾಗಿ ಕೃ.ವಿ.ವಿ ಪ್ರಾಧ್ಯಾಪಕರಾದ ಡಾ.ಕೆ.ಪಿ.ರಘುನಂದನ್ ಸೇರಿದಂತೆ ವಿವಿಧ ಸಂಘದ ಶ್ರೀನಿವಾಸ ಗೌಡ, ರತ್ನಮ್ಮ, ನರಸಿಂಹ ರೆಡ್ಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.