ಜಿ.ಕೆ.ವಿ.ಕೆ ಆವರಣದಲ್ಲಿ ರೈತ ಸಂತೆ ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಒತ್ತು

GKVK : ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ರೈತ ಸಂತೆಯನ್ನು ದಿನಾಂಕ:28-02-2026 (ಶನಿವಾರ) ಬೆಳಿಗ್ಗೆ 7.00 ರಿಂದ 4.00 ಗಂಟೆಯವರೆಗೆ ಜಿ.ಕೆ.ವಿ.ಕೆ ಆವರಣದ ಗಣಪತಿ ದೇವಸ್ಥಾನದ ಹತ್ತಿರ ಆಚರಿಸಲಾಗುತ್ತ್ತಿದೆ. ಕೃಷಿ ವಿ.ವಿ.ಯ ಕೃಷಿ ಮಹಾವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳು, ವಿಸ್ತರಣಾ ಶಿಕ್ಷಣ ಘಟಕಗಳು ಹಾಗೂ ಸಂಶೋಧನಾ ಕೇಂದ್ರಗಳು ಅಭಿವೃದ್ಧಿ ಪಡಿಸಿರುವ ಕೃಷಿ ಉತ್ಪನ್ನಗಳ / ಕೃಷಿ ಪರಿಕರಗಳನ್ನು ಮತ್ತು ವಿಶ್ವವಿದ್ಯಾನಿಲಯದ ವೈಜ್ಞಾನಿಕ ಸಲಹೆಗಳಿಂದ ರೈತರು ಹಾಗೂ ರೈತ ಉತ್ಪಾದಕ ಸಂಸ್ಥೆಗಳು ಅಭಿವೃದ್ಧಿ ಪಡಿಸಿರುವ ಕೃಷಿ ಉತ್ಪನ್ನ ಮತ್ತು ಪರಿಕರಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಆಯೋಜಿಸಲಾಗುವುದು. 

ಈ ಬಾರಿಯ ರೈತರ ಸಂತೆಯ ವಿಶೇಷತೆಗಳು – ಕಲ್ಲಂಗಡಿ, ಕರಬೂಜ ಹಣ್ಣು, ದ್ರಾಕ್ಷಿ ವಿಶೇಷವಾಗಿ ಸಾವಯವ ಉತ್ಪನ್ನಗಳು. ಇದರ ಜೊತೆಗೆ ಗುಣಮಟ್ಟದ ರಾಜಮುಡಿ ಅಕ್ಕಿ, ತಜಾ ಅಣಬೆ, ಆರೋಗ್ಯಯುತ ಹಣ್ಣು ಹಾಗೂ ತರಕಾರಿಗಳ ಪಾನಿಯ ಮಿಶ್ರಣಗಳು, ಅಲಂಕಾರಿಕ ಮೀನು ಮರಿಗಳು ಇತ್ಯಾದಿ.
 
ಇದರ ಜೊತೆಗೆ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ತೋಟಗಾರಿಕೆ: ಮಾವು, ಹಲಸು, ಸುಗಂಧ ಮತ್ತು ಔಷಧೀಯ ಸಸ್ಯಗಳು, ಅಲಂಕಾರಿಕ ಗಿಡಗಳು, ಜೈವಿಕ ಗೊಬ್ಬರಗಳು, ಕೃಷಿ ಯಂತ್ರೋಪಕರಣಗಳು, ಎರೆಹುಳು ಗೊಬ್ಬರ, ಸಸ್ಯ ಸಂರಕ್ಷಣೆ: ಜೈವಿಕ ಕೀಟನಾಶಕಗಳು, ಕರಕುಶಲ ವಸ್ಥುಗಳು: ಅಡಿಕೆ ಉತ್ಪನ್ನಗಳು, ರೇಷ್ಮೆ ಕೃಷಿಯ ಉಪ – ಉತ್ಪನ್ನಗಳು, ಜೇನು ಕೃಷಿ, ವಾಣಿಜ್ಯೀಕರಣ ಉತ್ಪನ್ನಗಳು, ಪಶು ಸಂಗೋಪನೆ, ಕೃಷಿ ಪ್ರಕಟಣೆಗಳು, ವಿಶ್ವವಿದ್ಯಾನಿಲಯದ ಬಗ್ಗೆ ಮಾಹಿತಿ ಇನ್ನು ಮುಂತಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿರುತ್ತದೆ. ಸಾರ್ವಜನಿಕರು ಮತ್ತು ರೈತರು ಈ ವಿನೂತನ ಸಂತೆಯ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿ.